ಪರಿಚಯ
ಲೇಖಕಿ ಮೂಲತಃ ತುಮಕೂರಿನವರು, ಕಳೆದ 23 ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ.. ಹವ್ಯಾಸೀ ಬರಹಗಾರ್ತಿ.
ʼಐದುಬೆರಳುಗಳುʼ ʼತಿರುವುಗಳುʼ (2022) ಮತ್ತು ʼನಂಬಿಕೆಯೆಂಬ ಗಾಳಿಕೊಡೆʼ (2023) ಇವರ ಪ್ರಕಟಿತ ಕಥಾಸಂಕಲನಗಳು. ʼ, ʼಭಿಕ್ಷೆಗೆ ಬೀಳದ ಬದ್ಧತೆʼ (2024) ಇವರ ಪ್ರಕಟಿತ ಕವನ ಸಂಕಲನ, ʼಕೋವಿಡ್ ಡೈರಿʼ (2021) ಮತ್ತು ʼವಿದೇಶ ಪ್ರಯಾಣ, ಕೈತುಂಬ ಕಾಂಚಾಣʼ (2024 ) ಅಂಕಣ ಬರಹಗಳ ಪುಸ್ತಕಗಳು. ʼಬಾಯೆಂಬ ಬ್ರಂಹಾಂಡʼ (2018)ವೈದ್ಯಕೀಯ ಬರಹಗಳ ಪುಸ್ತಕ ʼರಮ್ಯಪ್ರೀತಿ, ವಿಜ್ಞಾನ ಮತ್ತು ಪ್ರಕೃತಿʼ (2024) ಮತ್ತು ಒಡಲು ಮತ್ತು ಸೃಷ್ಟಿ (2026) ಇವರ ವಿಷ್ಲೇಶಣಾತ್ಮಕ ಕೃತಿಗಳು. ‘ವಿದೇಶ ಪ್ರಯಾಣ, ಕೈತುಂಬ ಕಾಂಚಾಣ; (2026) ಇವರ ಪ್ರ/ನಿ/ಅನಿವಾಸೀ ಪ್ರಬಂಧ ಸಂಕಲನ ರೂಪದ ಆತ್ಮಕಥನವಾಗಿದೆ.
ಐದು ಬೆರಳುಗಳು ಕಥಾ ಸಂಕಲನಕ್ಕೆ ಇತ್ತೀಚೆಗೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ (2023) ದೊರಕಿದೆ. ಧಾರವಾಡದ ಶ್ರಾವಣ ಸಂಸ್ಥೆ ʼಅನಿವಾಸಿ ಸಾಹಿತ್ಯ ಶ್ರೀʼ (2022) ಪ್ರಶಸ್ತಿ ನೀಡಿದೆ. ʼತಿರುವುಗಳುʼ ಕಥಾಸಂಕಲನಕ್ಕೆ ವಿದ್ಯಾಧರ ಮುತಾಲಿಕ ದೇಸಾಯಿ ಪ್ರಶಸ್ತಿ ದೊರೆತಿದೆ (2022) ಪ್ರಬಂಧಗಳು ಸುಧಾ ಯುಗಾದಿ ಸ್ಪರ್ಧೆಗಳಲ್ಲಿ (2024 ಮತ್ತು 2019) ಬಹುಮಾನಿತವಾಗಿವೆ.
ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ(2024) ಮತ್ತು ವಾಣಿ ಕೌಟುಂಬಿಕ ಕಥಾ ಸ್ಪರ್ಧೆ(2024)ಗಳಲ್ಲಿ ಮೆಚ್ಚುಗೆಯ ಬಹುಮಾನ, ಸಮಾಜಮುಖಿ ಕಥಾ ಸ್ಪರ್ಧೆಯ ಬಹುಮಾನ (2023)ಲೇಖಿಕಾ ಸಂಘದ ತ್ರಿವೇಣಿ ಸ್ಮೃತಿ ಮನೋ ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021) 3K ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ(2021) ಯು.ಎ.ಇ.ಯ ಧ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಜಾಗತಿಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2021), ಕಹಳೆ ಕಥಾ ಸ್ಪರ್ಧೆಯ ಅತ್ಯುತ್ತಮ ಕಥೆ (2021 ಮತ್ತು 202೦) ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯಲ್ಲಿ ನಿರ್ಮಲ ಎಲಿಗಾರ್ ದತ್ತಿ ಪ್ರಥಮ ಬಹುಮಾನ(2019), ಸುಧಾ ಪತ್ರಿಕೆಯ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ (2019), ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2017), ಸಿಂಗಾಪೂರ್ ನಡೆಸಿದ ಸಿಂಚನ ಕಥಾ ಸ್ಪರ್ಧೆಯಲ್ಲಿ ಪ್ರಥಮ (2016) ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನ (2017) ತುಷಾರ ಚಿತ್ರಕವನ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು (1997) ಇವರಿಗೆ ದೊರೆತಿವೆ.
ಬೆಂಗಳೂರಿನ ಸರ್ಕಾರಿ ದಂತವೈದ್ಯಕೀಯ ಕಾಲೇಜಿನ ಪದವಿ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಡೆಂಟಲ್ ಇಂಪ್ಲಾಂಟಜಿಸ್ಟ್ ಆಗಿ ಹಲವು ದಂತ ಚಿಕಿತ್ಸಾಲಯಗಳಲ್ಲಿ ಕೆಲಸಮಾಡುತ್ತಿದ್ದಾರೆ. ಪ್ರಸ್ತುತ ಇಂಗ್ಲೆಂಡಿನ ಲಿಂಕನ್ ಎನ್ನುವ ನಗರದಲ್ಲಿ ವಾಸವಾಗಿದ್ದಾರೆ.ಓದು,ಬರಹ,ನಿರೂಪಣೆ, ಪ್ರವಾಸ, ನಾಟಕದ ಹವ್ಯಾಸಗಳೊಂದಿಗೆ ನಾಡಿನ ಮತ್ತು ಇಂಗ್ಲೆಂಡಿನ ಹಲವು ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ
ಪ್ರಕಟಗೊ೦ಡ ಕೃತಿಗಳು
|
ಕ್ರಮ ಸಂಖ್ಯೆ/ |
ಶೀರ್ಷಿಕೆ/ |
ಪ್ರಕಾರ/ |
ಪ್ರಕಾಶನ/ |
ಮಾಧ್ಯಮ/ |
ಪ್ರಕಟಣೆಯ ವರ್ಷ/ |
|
1 |
ಒಡಲು ಮತ್ತು ಸೃಷ್ಟಿ Odalu mattu srushti |
ಸಾಮಾಜಿಕ/ವೈದ್ಯಕೀಯ Social/scientic |
ಪರಿಚಯ ಪ್ರಕಾಶನ Parichaya prakashana |
ಮುದ್ರಿತ ಮಾದ್ಯಮ
|
2026 |
|
2 |
Videsha prayana, kaitumba kanachana |
Collection of essays-travelogue, resident stories and an introspection |
ಸಾವಣ್ಣ ಪ್ರಕಾಶನ Sawanna prakashana |
ಮುದ್ರಿತ ಮಾದ್ಯಮ |
2026 |
|
3 |
Bhikshege beelada baddhathe |
Collection of poems |
ಕಥಾಬಿಂದು Kathabindu publication |
ಮುದ್ರಿತ ಮಾದ್ಯಮ
|
2024 |
|
4 |
Ramya Preethi, vijnana and society |
Social scientific |
ನವಕರ್ನಾಟಕ ಪ್ರಕಾಶನ Navakarnataka publication |
ಮುದ್ರಿತ ಮಾದ್ಯಮ |
2024 |
|
5 |
Nambike emba gaalikode |
Short stories collection/Anthology |
ವೀರಲೋಕ ಪ್ರಕಾಶನ Veeraloka publication |
ಮುದ್ರಿತ ಮಾದ್ಯಮ |
2023 |
|
6 |
Idu beralugalu |
Short stories collection/Anthology |
ಸೀಮ ಪ್ರಕಾಶನ Seema publication |
ಮುದ್ರಿತ ಮಾದ್ಯಮ |
2022 |
|
7 |
Thiruvugalu |
Short stories collection/Anthology |
ಸೀಮ ಪ್ರಕಾಶನ Seema publication |
ಮುದ್ರಿತ ಮಾದ್ಯಮ |
2022 |
|
8 |
Covid Diary |
Collection of column writings on Covid |
ಸಾವಣ್ಣ ಪ್ರಕಾಶನ Sawanna publications |
ಮುದ್ರಿತ ಮಾದ್ಯಮ |
2021 |
|
9 |
Baayemba bramhanda |
Professional/oral health |
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ Department of karnataka saahitya and samshriti |
ಮುದ್ರಿತ ಮಾದ್ಯಮ |
2018 |








