ಡಾ. ಮೀನಾ ಸುಬ್ಬರಾವ್

  • docmeena@gmail.com
  • ಸಲಿನಾಸ್ ಕ್ಯಾಲಿಫೋರ್ನಿಯ, ಅಮೆರಿಕ

ಕವನಗಳು

ಪರಿಚಯ

ಡಾ. ಮೀನಾ ಸುಬ್ಬರಾವ್ ಮೂಲತಃ ಕಡೂರಿನವರು, ಹುಟ್ಟಿ, ಬೆಳೆದುದೆಲ್ಲಾ  ಕಡೂರು. ಮೈಸೂರು ವೈದ್ಯಕೀಯ ವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದು, ಅಮೇರಿಕಾದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ,ಲಾಸ್ ಆಂಜಲೀಸ್ನಲ್ಲಿ ಮಕ್ಕಳ ಆರೋಗ್ಯ ಶಾಸ್ತ್ರದಲ್ಲಿ (ಪೀಡಿಯಾಟ್ರಿಕ್ಸ್ – ರೆಸಿಡೆನ್ಸಿ) MD ಮುಗಿಸಿ, ಸುಂದರವಾದ ಮಧ್ಯ ಕ್ಯಾಲಿಫೋರ್ನಿಯಾ ಕರಾವಳಿ/ ಸ್ಟೈನ್ಬೆಕ್ ದೇಶ ಎಂದು ಹೆಸರಾಗಿರುವ ಮಾಂಟೆರೆ/ ಸಲಿನಾಸ್ ಪ್ರದೇಶದಲ್ಲಿ  ಮಕ್ಕಳ ಆರೋಗ್ಯ ತಜ್ಞೆಯಾಗಿ 1996 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. 
 
ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಗಳು ಪರಿ ಪರಿ. ಕನ್ನಡದಲಿ ಬರೆಯುವ ಹವ್ಯಾಸ, ಕಥೆ, ಕವನ(ಭಕ್ತಿ ಗೀತೆಗಳು ಸೇರಿದಂತೆ), ಪ್ರಬಂಧ, ಹಾಸ್ಯ ಮುಂತಾದ ರೂಪಕಗಳ ಬರೆದು ಸಂಪದ, ದಟ್ಸಕನ್ನಡ, ಸ್ವರ್ಣ ಸೇತು( ಕನ್ನಡ ಕೂಟದ  ವಾರ್ಷಿಕ ಸಂಚಿಕೆ), ತನುಮನ (ಬ್ಲಾಗ್ ) ಮುಂತಾದ ಜಾಲತಾಣಗಳಲಿ ಪ್ರಕಟಿಸುತ್ತಾ ಬಂದಿದ್ದಾರೆ. ಕನ್ನಡ ಕೂಟದ ವಾರ್ಷಿಕ ಸಂಚಿಕೆ “ಸ್ವರ್ಣ ಸೇತು” ವಿಗೂ ಸಂಪಾದಕರಾಗಿ  ಸೇವೆ ಸಲ್ಲಿಸಿದ್ದಾರೆ. 2024 ನೇ ಸ್ವರ್ಣಸೇತು ಕಥಾ ಸ್ಪರ್ಧೆಯಲ್ಲಿ ಇವರ “ಬಿಳಿಯ ಮಚ್ಚೆ” ಒಂದು ಬಹುಮಾನಿತ ಕಥೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಭಕ್ತಿಗೀತೆಗಳು ಹೆಸರಾಂತ ಗಾಯಕರಾದ, ಶ್ರೀ ಪುತ್ತೂರು ನರಸಿಂಹ ನಾಯಕರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಈಗಾಗಲೆ ಧ್ವನಿ ಸುರುಳಿ ಬಿಡುಗಡೆಯಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕರಾದ ಶ್ರೀ ಪ್ರಸನ್ನ ವೈದ್ಯ ಅವರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಇನ್ನಷ್ಟು ಗೀತೆಗಳ ಧ್ವನಿ ಸುರುಳಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. 
 
ಬರವಣಿಗೆ ಜೊತೆಯಲಿ, ಕಲೆ, ನಾಟಕ, ಸಂಗೀತ ಇವುಗಳಲ್ಲಿಯೂ ಆಸಕ್ತಿ ಹೊಂದಿದ್ದು ಅಮೇರಿಕಾದ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸತತವಾಗಿ ಭಾಗವಹಿಸಿ ಕನ್ನಡಾಭಿಮಾನ, ನುಡಿ ಸೇವೆಯನು  ಎತ್ತಿ ತೋರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರವಾಸ ಮತ್ತು ಸ್ನೇಹಕೂಟಗಳೂ ಇವರ ಇತರ ಆತ್ಮೀಯ ಹವ್ಯಾಸಗಳು. 
 
ಪ್ರಸ್ತುತ, ಪತಿ – ಕೃಷ್ಣ ಸುಬ್ಬರಾವ್ (ಪ್ರೊಫೆಸರ್, University of California, Davis) ರೊಂದಿಗೆ ಮಾಂಟೆರೆ / ಸಲೀನಾಸ್ – Steinbeck ದೇಶವೆಂದೇ ಹೆಸರಾಗಿರುವ California ಮಧ್ಯ ಕರಾವಳಿಯಲ್ಲಿ ವಾಸ. 
 
ಇವರ  ಚೊಚ್ಚಲ ಪುಸ್ತಕ, ‘ಕಡೂರಿನ ದಿನಗಳು’ – ಲಲಿತ ಪ್ರಬಂಧಗಳ ಸಂಕಲನ ಇದೇ ವರುಷ – 2025 – ಫೆಬ್ರವರಿ 1 ರಂದು ಬೆಂಳೂರಿನಲ್ಲಿ ಬಿಡುಗಡೆಯಾಗಿದೆ.

ಪ್ರಕಟಗೊ೦ಡ ಕೃತಿಗಳು

ಕ್ರಮ ಸ​೦ಖ್ಯೆ ಶೀರ್ಷಿಕೆ ಪ್ರಾಕಾರ​ ಪ್ರಕಟಣೆಯ ಮಾಧ್ಯಮ​ ವಿವರ ಮತ್ತು ಕೊ೦ಡಿ
1 ಆಕಾಶ ದೀಪ ಸಣ್ಣ ಕಥೆ ಎಲೆಕ್ಟ್ರಾನಿಕ್ ಮಾಧ್ಯಮ​ http://thatskannada.com/
2 ತಬ್ಬಲಿಯು ನೀನಾದೆ ಮಗುವೆ ಸಣ್ಣ ಕಥೆ ಎಲೆಕ್ಟ್ರಾನಿಕ್ ಮಾಧ್ಯಮ​ http://thatskannada.com/
3 ಪ್ರೇಮಾಂತರಂಗ ಸಣ್ಣ ಕಥೆ ಮುದ್ರಿತ ಮಾಧ್ಯಮ Swarnasetu
4 ಅನುರಾಗ ಅರಳಿತು ಸಣ್ಣ ಕಥೆ ಮುದ್ರಿತ ಮಾಧ್ಯಮ Swarnasetu
5 ನಾರಾಯಣ ದರ್ಶನ ಇತರೆ ಪ್ರಾಕಾರ​ ಎಲೆಕ್ಟ್ರಾನಿಕ್ ಮಾಧ್ಯಮ​ https://tanumana.wordpress.com/
6 ಹಾಸ್ಯಲೇಖನ – ಹೆಸರಿನ ಹಸಿರು ಪ್ರಬ​೦ಧ /ವಿಮರ್ಶೆ ಮುದ್ರಿತ ಮಾಧ್ಯಮ Swarnasetu
7 ಹಾಸ್ಯ ಲೇಖನ – ಚಹರೆಗಳು ಪ್ರಬ​೦ಧ /ವಿಮರ್ಶೆ ಮುದ್ರಿತ ಮಾಧ್ಯಮ Swarnasetu
8 ಕದ್ದು ತಿಂದ ಲಾಡು ಉಂಡೆ ಪ್ರಬ​೦ಧ /ವಿಮರ್ಶೆ ಎಲೆಕ್ಟ್ರಾನಿಕ್ ಮಾಧ್ಯಮ​ https://tanumana.wordpress.com/
9 ಶಂಕ್ರು ಅಂಗಡಿ ಪ್ರಬ​೦ಧ /ವಿಮರ್ಶೆ ಎಲೆಕ್ಟ್ರಾನಿಕ್ ಮಾಧ್ಯಮ​ https://tanumana.wordpress.com/
10 ನಾವು ಜಿ. ಪಿ. ಎಸ್ ಆಗಿದ್ದು ಹೀಗೆ ಪ್ರಬ​೦ಧ /ವಿಮರ್ಶೆ ಮುದ್ರಿತ ಮಾಧ್ಯಮ Kannada sahitya Ranga (KSR publication
11 ಕಾಲಾಯ ತಸ್ಮೈ ನಮಃ ಪ್ರಬ​೦ಧ /ವಿಮರ್ಶೆ ಮುದ್ರಿತ ಮಾಧ್ಯಮ Kannada sahitya Ranga ( KSR)
12 ಕಂಡೆ ನಾ ಕನಸಿನಲಿ ಗುರು ರಾಘವೇಂದ್ರರ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/z7KBN1wKJLs
13 ಹನುಮ ನಿನಗೆ ಶಿರವ ಮಣಿವೆ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​
14 ಗುರುವಾರ ಬಂದಾಗ ಗುರು ನೀನು ಇರುವಾಗ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​
15 ಲೋಕದೊಳಲ ಲೋಕನಾಥಗೆ ನಿತ್ಯ ಮಂಗಳಂ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/VmGWeZADZIQ
16 ಪಾಲಿಸು ಪಾರ್ವತಿ ಪರಮೇಶ್ವರಿ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/mlXT8xMwZfk
17 ಕೇಳದೇನೋ ಹರಿ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/0lnpaT3GVK4
18 ಬೇಡುವೆ ನಿನಗೆ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/YCG1_DYp1Hg
19 ನಂದನ ಕಂದನೆ ಬಾರೋ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​
20 ಶರಣು ಶಿವ ಶಂಕರ ಭಕ್ತಿಗೀತೆ ಎಲೆಕ್ಟ್ರಾನಿಕ್ ಮಾಧ್ಯಮ​ https://youtu.be/3ksSbaaZw7I
21 ಮಕ್ಕಳ ಆರೋಗ್ಯ ಲೇಖನ ಲೇಖನ ಎಲೆಕ್ಟ್ರಾನಿಕ್ ಮಾಧ್ಯಮ​ https://play.google.com/books/reader?id=5RCkEAAAQBAJ&hl=en

ಪ್ರಕಟಗೊಳ್ಳದ ಕೃತಿಗಳು

———

Scroll to Top