ದೈವತೆಯ ಕರುಣೆ, ಜೀವನದ ನೋವುಗಳ ಬೇಗೆಗೆ, ನೆರಳಾಗುವ ದಾರಿಯ ತೋರಿದೆ. ನಗಿಸಿ, ನಲಿಸಿದ ಜೀವನ, ತನ್ನ ನಿಷ್ಠುರವಾದ ದ್ವಂದ್ವತೆಯ, ತದ್ವಿರುದ್ಧದ ಮುಖವಾಡಗಳನು ತೋರಿ ನಮ್ಮ ಆಯವನ್ನ ತಪ್ಪಿಸುವಲ್ಲಿ ನಿಷ್ಣಾತ. ಕೂಲಂಕುಶವಾಗಿ ನೋಡಲು, ದ್ವಂದ್ವತೆಗಳೇ ನಶ್ವರ, ಕಾರಣ, ಇರುವುದು “ಒಂದೇ”. ಈ ದ್ವಂದ್ವತೆಗಳ ಆರ್ಭಟದ ಅಲೆಗಳಲಿ, ಕಾಣಸಿಗುವ ಕ್ಷಣಿಕ, ವಿಭಿನ್ನ, ಕರಿಗೇಹೋಗುವ, ಮನದ ಭಾವನೆಗಳನು ಹಂಚಿಕೊಳ್ಳುವ ಒಂದು ಚಿಕ್ಕ ಅಭಿರುಚಿಯನ್ನ ಗುರುತಿಸಿ, ಈ ಗುಂಪಿನ ತೋಳ್ತೆಕ್ಕೆಗೆ ಸಿಗುವಂತೆ ಮಾಡಿದ, ಸಕಲರಿಗೂ ವಿನಮ್ರ ನಮನಗಳು.