—–
ಪದ್ದು ಮೇಲನಹಳ್ಳಿ, ತುಮಕೂರಿನ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಊರಿನವರು. ಬಹಳಷ್ಟು ವರ್ಷಗಳಿಂದ ಸಿಲಿಕಾನ್ ಕಣಿವೆಯಲ್ಲಿ ಕೆಲಸ ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು. ಕನ್ನಡ ಕಲಿ, ಕನ್ನಡ ನುಡಿ ಕಾರ್ಯಕ್ರಮಗಳನ್ನು ನಮ್ಮ ಅಮೆರಿಕನ್ನಡಗರಿಗೆ ಮತ್ತು ಅವರ ಮಕ್ಕಳಿಗೆ ಅನುವು ಮಾಡಿಕೊಟ್ಟು ವರ್ಷೇ ವರ್ಷೇ ಅದನ್ನು ಪೋಷಿಸುತ್ತಾ ಮುನ್ನಡೆಯಲು ಸಹಾಯ ಮಾಡುತ್ತಿದ್ದಾರೆ. ಕನ್ನಡ ಕಲಿ ಯ ಮಕ್ಕಳಿಗೆ ಅನುಕೂಲವಾಗುವಂತೆ ಪ್ರಪ್ರಥಮ ಕನ್ನಡ ವರ್ಣಮಾಲೆ ಮತ್ತು ಅಭ್ಯಾಸ ಪುಸ್ತಕ ತಯಾರಿಸಿ ಕನ್ನಡ ಕಲಿಕೆಗೆ ಮಾದರಿ ಪುಸ್ತಕವನ್ನಾಗಿಸಿದ್ದಾರೆ.
ಇವರು “ಸ್ವರ್ಣ ಸೇತು” , ಕೆ ಕೆ ಎನ್ ಸಿ ಯ ವಾರ್ಷಿಕ ಸಂಚಿಕೆಗೆ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ವರ್ಣಸೇತು ನಾಮಕರಣ ಸಮಿತಿಯ ಸದಸ್ಯರು ಸಹ. ಕೆ ಕೆ ಎನ್ ಸಿ ಸಮಿತಿಯಲ್ಲಿ, ಕಾರ್ಯದರ್ಶಿಯಾಗಿ, ಆಡಳಿತ ಸಮಿತಿಯ ಸದಸ್ಯರರಾಗಿ, ಬೋರ್ಡ್ ಧರ್ಮದರ್ಶಿ ಯಾಗಿ ಸದಾ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.
ಅವರ ಅನೇಕ ಸಾಹಿತ್ಯ ಪ್ರಕಾರಗಳು ನಿಯತಕಾಲಿಕೆಗಳಲ್ಲಿ, ಕನ್ನಡ ಸಂಘಗಳ ಸಂಚಿಕೆಗಳಲ್ಲಿ ಪ್ರಕಟವಾಗಿವೆ.
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಣೆಯ ಮಾಧ್ಯಮ | ವಿವರ ಮತ್ತು ಕೊ೦ಡಿ |
---|---|---|---|---|
1 | ಧರ್ಮ ಸಮನ್ವಯ ಮಂದಿರ | ಕವನ | ಮುದ್ರಿತ ಮಾಧ್ಯಮ | https://fliphtml5.com/mgvbo/fhom |
2 | ಸಂಪಾದಕೀಯ – ಸ್ವರ್ಣ ಸೇತು – ೨೦೦೩ | ಇತರೆ ಪ್ರಾಕಾರ | ಮುದ್ರಿತ ಮಾಧ್ಯಮ | — |
———