ನಾನು, ಶ್ರೀಧರ ಕುಲಕರ್ಣಿ, ಹುಟ್ಟಿ ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಕಳೆದ ೨೩ ವರ್ಷಗಳಿಂದ ಅಮೇರಿಕಾದ ಬಾಸ್ಟನ್ ಶಹರದಲ್ಲಿ ವಾಸಿಸುತ್ತಿರುವೆ. ಇಲ್ಲಿನ ಮಂದಾರ ಕನ್ನಡ ಕೂಟದ ಸಕ್ರಿಯ ಕಾರ್ಯಕರ್ತ. New England ನ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಆದಷ್ಟು ಸೇವೆ ಮಾಡುತ್ತಿರುವೆ. ಸುಮಾರು ೨೦ ವರ್ಷ ಉನ್ನತ ಶೈಕ್ಷಣಿಕ ವಿದ್ಯಾಲಯಗಳಲ್ಲಿ ಕೆಲಸ ಮಾಡಿದ ನಂತರ ಈಗ ನನ್ನದೇ ಆದ Education Consulting ಕಂಪನಿಯನ್ನು ನಡೆಸುತ್ತಿರುವೆ.