ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಓದಿದ್ದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್. ಉತ್ತರ ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ವಾಸ. ಅಮೇರಿಕೆಯಲ್ಲಿನ ಕನ್ನಡ ಕೂಟ, ಅಕ್ಕ, ಕನ್ನಡ ಸಾಹಿತ್ಯ ರಂಗಗಳ ಪ್ರಕಟಣೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಅಮೂರ್ತ ಚಿತ್ತ’ ಮತ್ತು ‘ಪೆಸಿಫಿಕ್ ತೀರದ ಪಾತಿ’ ಕಥಾಸಂಕಲನಗಳು, “ಅಂತು” ಕಾದಂಬರಿ ಪ್ರಕಟಿತ ಕೃತಿಗಳು. Albert Camusನ The Stranger ಕಾದಂಬರಿಯನ್ನು ಕನ್ನಡಕ್ಕೆ ‘ಅಪರಿಚಿತ’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಇವರ ಕಥೆಗಳು ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಣೆಯ ಮಾಧ್ಯಮ | ವಿವರ ಮತ್ತು ಕೊ೦ಡಿ |
---|---|---|---|---|
1 | ಅಮೂರ್ತ ಚಿತ್ತ | ಸಣ್ಣ ಕಥೆ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
2 | ಅಂತು | ಕಾದ೦ಬರಿ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
3 | ಅಪರಿಚಿತ | ಕಾದ೦ಬರಿ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
4 | ಪೆಸಿಫಿಕ್ ತೀರದ ಪಾತಿ | ಸಣ್ಣ ಕಥೆ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
—————————————–