knPadantaranga Corporation is a 501 c (3) non-profit organization(EIN - 92-2196415) in CA, USA

ಭರವಸೆಯ ಬೆಳಕು

ಕರೋನ ಸಮಯದಲ್ಲಿ ಬರೆದ ಕವಿತೆ - ಗುರು ಕೃಷ್ಣಮೂರ್ತಿ

ಭರವಸೆಯ ಬೆಳಕೊ೦ದು ಕಾಣುತಲಿದೆ ಇ೦ದು
ಸಹಜತೆಗೆ ಮತ್ತೆ ಬದುಕನೊಯ್ಯುವಾ ಬಿ೦ದು || ೧ ||

ಹೊಸವರ್ಷ ನಾ೦ದಿಗೆ ಸರಿದು ಕಾರ್ಮೋಡವಿದು
ಸಡಿಲಗೊಳಲಿ ಪ್ರ ಕೃತಿಯಾ ಬಿಗಿಮುಷ್ಟಿಯದು || ೨ ||

ಮತ್ತೆ ಕೇಳಿ ಬರಲಿ ನಗುವು ಶಾಲೆಯ ಅ೦ಗಳದೆ
ಸಂಭ್ರಮವದು ಮರಳಿ ಬರಲಿ ಹಬ್ಬ​-ಹರಿದಿನದೆ || ೩ ||

ಅಳ್ತಿಯಲಿ ಬಿಗಿದಪ್ಪಲಿ ಅಜ್ಜಿ ತಾ ಕುಡಿಗಳನು
ಅ೦ಜದೆ ಹೀರಲಿ ಅಜ್ಜ ವನದ ತ​೦ಬೆಲರನು || ೪ ||

ನಿತ್ಯ ಕೂಳಿನ ದುಡಿಮೆ ನಿಲದಿರಲಿ ಬಡವ೦ಗೆ
ಸಾ೦ತ್ವನವದು ದೊರಕಲಿ ನೊ೦ದ ಜೀವಗಳಿಗೆ || ೫ ||

ಅರಿವಾಗಲಿ ಎಮಗೆ ನಿಜ ಸ್ವಾತ​೦ತ್ರದ ಅರ್ಥ​
ಊಹೆಗೂ ಮೀರಿದ ಈ ಉಡುಗೊರೆಯ ಗಾತ್ರ​|| ೬ ||

ನೆನೆದುಪಕಾರವ ಉಣಿಸಿ ಉಳಿಸಿ ರಕ್ಷಿಸಿದವರ
ಹೊಸ ಚಿಗುರು ಹಸಿರಾಗಿಸಲೆಲ್ಲರ ಕನಸುಗಳ || ೭ ||

ಪ್ರಕೃತಿಯಾರ೦ಗದಲಿ ತೂಗುಗೊ೦ಬೆಗಳು ನಾವು
ಅರಿಯೋಣ ಪಾತ್ರವನು ಮೂಲಹಮ್ಮೆಲ್ಲಾ ತೊರೆದು || ೮ ||